ಮಹಾದೇವಿಯಮ್ಮ- ಹನ್ನೆರಡನೆಯ ಶತಮಾನದ ಒಬ್ಬ ಶಿವಶರಣೆ ಹಾಗೂ ವಚನಕಾರ್ತಿ, ಈಕೆ ಮೋಳಿಗೆ ಮಾರಯ್ಯನ ಪತ್ನಿ, ಮೋಳಿಗೆ ಮಾರಯ್ಯ ಕಾಶ್ಮೀರದಲ್ಲಿ ಮಹಾದೇವರಾಜನೆಂಬ ಹೆಸರಿನಿಂದ ಮಾಂಡವ್ಯಪುರವನ್ನು ಆಳುತ್ತಿದ್ದ. ಕಾಲಕ್ರಮದಲ್ಲಿ ಈಕೆ, ಈಕೆಯ ಗಂಡ ಮಾರಯ್ಯ ಮತ್ತು ಮಾರಯ್ಯನ ತಂಗಿ ಬೊಂತಾದೇವಿ ಶಿವಾನುಭವಕ್ಕೆ ಒಲಿದು ಕಲ್ಯಾಣಕ್ಕೆ ಬಂದು ಕಟ್ಟಿಗೆ ಒಡೆಯುವ ಕಾಯಕವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಜೀವಿಸುತ್ತಿದ್ದರು. ಇವರದು ಶ್ರೇಷ್ಠ ಶರಣ ದಾಂಪತ್ಯ, ಈಕೆ ವಚನಗಳನ್ನು ರಚಿಸಿದ್ದಾಳೆ. 
ನಿಃಕಳಂಕ ಮಲ್ಲಿಕಾರ್ಜುನ ಎಂಬುದು ಈಕೆಯ ವಚನಗಳ ಅಂಕಿತ. ಈ ತನಕ ಈಕೆಯ 69 ವಚನಗಳು ಸಿಕ್ಕಿವೆ. ಒಂದು ವಚನ ಹೀಗಿದೆ. 
	ನೀರು ನೆಲೆನಿಲ್ಲದೆ ಇರಬಹುದೆ
	ಬೀಜ ನೆಲೆಯಿಲ್ಲದ ಹುಟ್ಟಬಹುದೆ
	ಜ್ಞಾನ ಕ್ರಿಯೆಯಿಲ್ಲದೆ ಅ¾õÉಯಬಹುದೆ
	ಚತ್ತಿ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ.
	ಇಂತೀ ಕ್ರೀ ಜ್ಞಾನ ಸಂಬಂಧಸ್ಥಲಭಾವ ಎನ್ನಯ್ಯ ಪ್ರಿಯ ಇಮ್ಮಡಿ
	ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಉಭಯಸ್ಥಲ ಭೇದ	
	ಈಕೆಯ ವಚನಗಳಲ್ಲಿ ಕ್ರಿಯಾಜ್ಞಾನಗಳ ಸಂಬಂಧ ಇಷ್ಟಲಿಂಗ ಪ್ರಾಣಲಿಂಗಗಳ ಪರಸ್ಪರ ಸಂಬಂಧ, ಷಟ್‍ಸ್ಥಲಗಳ ಸ್ವರೂಪ ಇವನ್ನು ಮಾರ್ಮಿಕವಾಗಿ ವಿವೇಚಿಸಿರುವುದನ್ನು ಕಾಣಬಹುದು. 
	                     (ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ